ಅವರೆಲ್ಲಾ ಮರಳಿ ಹೋಗುತ್ತಾರೆ ಮನೆಗೆ ಹೇಳುತ್ತಾರೆ, ತಂತಮ್ಮ ಪತ್ನಿಯರಿಗೆ ಕಂಡಿಲ್ಲ ಇಂಥ ಯಾವ ಹೆಣ್ಣನ್ನೂ , ನಾನು ಈವರೆಗೆ. ಆದರೂ..... ಅವರೆಲ್ಲಾ ಮರಳಿ ಹೋಗುತ್ತಾರೆ ಮನೆಗೆ.
ಎನ್ನುತ್ತಾರವರು ಎಷ್ಟು ಸ್ವಚ್ಚವೇ, ನಿನ್ನ ಮನೆ- ಮನ. ಇಲ್ಲ ನಿನ್ನಲ್ಲಿ ಒಂದಿನಿತೂ ಸಣ್ಣತನ. ನೀನದೆಷ್ಟು ನಿಗೂಢ! ಆದರೂ.... ಅವರೆಲ್ಲಾ ಮರಳಿ ಹೋಗುತ್ತಾರೆ ಮನೆಗೆ.
ನನ್ನದೇ ಮಾತು ಸದಾ ಅವರೆಲ್ಲರ ತುಟಿ ಮೇಲೆ ಎಷ್ಟು ಚೆಂದವೇ ನಿನ್ನ ನಗು, ನಿನ್ನ ಕಟಿ , ಚುರುಕು ಮತಿ. ಇರುತ್ತಾರೆ ಅವರೆಲ್ಲಾ ನನ್ನೊಂದಿಗೆ ಒಂದು, ಎರಡು ಅಥವಾ ಮೂರು ರಾತ್ರಿ. ಆದರೂ......
Write a comment ...