ಇಲ್ಲಿ ಯಾವನೂ ದ್ವೀಪವಲ್ಲ

ಇಲ್ಲಿ ಯಾವನೂ ದ್ವೀಪವಲ್ಲ
ತನ್ನಷ್ಟಕ್ಕೆ ತಾನೇ.

ಪ್ರತಿಯೊಬ್ಬನೂ ಈ ಭೂ ಖಂಡಕ್ಕೆ ಸೇರಿದವ.
ಹಿರಿದಾದದ್ದರ, ಒಂದು ಕಿರು ಭಾಗ

ಒಂದು ಹಿಡಿ ಮಣ್ಣು ಕಡಲಲ್ಲಿ ಕೊಚ್ಚಿ ಹೋದರೆ
ಇಂದಿಡೀ ಖಂಡವೇ ಕೊಚ್ಚಿ ಹೋದಂತೆ.
ಅಥವಾ ಕಡಲಿಗೆ ಚಾಚಿಕೊಂಡ ಬಂಡೆ ಕೊಚ್ಚಿ ಹೋದಂತೆ.
ಅಥವಾ ಗೆಳೆಯನೊಬ್ಬನ ಮನೆ ಕೊಚ್ಚಿ ಹೋದಂತೆ,
ಇಲ್ಲ, ನಿನ್ನದೇ ಮನೆ ಕೊಚ್ಚಿಕೊಂಡು ಹೋದಂತೆ.

ಯಾರೊಬ್ಬನ ಸಾವು ಕೂಡ ನನ್ನನ್ನು ನಷ್ಟಗೊಳಿಸುತ್ತದೆ.
ಕಾರಣ, ನಾನೂ ಕೂಡ ಮನುಕುಲದಲ್ಲಿ ಒಬ್ಬನಾಗಿ ಬೆರೆತು ಹೋಗಿದ್ದೇನೆ.

ಆದ್ದರಿಂದ, ಯಾರಿಗಾಗಿ ಗಂಟೆ ಮೊಳಗುತ್ತಿದೆಯೆಂದು ಕೇಳಬೇಡ,
ಅದು ಮೊಳಗುತ್ತಿರುವುದು ನಿನಗಾಗಿಯೇ.

ಮೂಲ: ಜಾನ್ ಡನ್ No Man is an Island....

ಕರೋನಾಗೆ ಜೀವ ತೆತ್ತವರನ್ನು ನೆನೆದು.

Write a comment ...

ಕಂಡದ್ದು, ಕೇಳಿದ್ದು, ಓದಿದ್ದು

ಟಿಪ್ಪಣಿ, ಬರಹ ಮತ್ತು ಅನುವಾದ